ನಮ್ಮ ವೇಗದ ನಗರದ ಬದುಕಿನಲ್ಲಿ ಎಲ್ಲವೂ ಕಮಾಡಿಟಿಗಳಾದ ಹಾಗೆಯೇ ನಗುವೂ ಒಂದು ಪ್ರಾಡಕ್ಟ್ ಆಗುತ್ತಿದೆಯಾ ಎಂಬ ಸಂಶಯ ಮೂಡುತ್ತದೆ. ಜನರಿಗೆ ನಗುವುದಕ್ಕೆ ಕಾರಣಗಳು ಬೇಕು. ನಗು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರೆ ಜೋಕುಗಳನ್ನು ಹುಡುಕಲು ಶುರು ಮಾಡುತ್ತಾರೆ. ಜೋಕ್ ಪುಸ್ತಕಗಳನ್ನು ಕೊಳ್ಳುತ್ತಾರೆ. ನೂರಾರು ರುಪಾಯಿ ಶುಲ್ಕ ಕಟ್ಟಿ ಲಾಫಿಂಗ್ ಕ್ಲಬ್ಬುಗಳಿಗೆ ಸೇರಿಕೊಂಡು ನಗುತ್ತಾರೆ. ಕೆಲವರು ತುಂಬಾ ಪರಿಶ್ರಮ ವಹಿಸಿ ನಗುವುದರಲ್ಲಿ ಗಂಭೀರವಾದ ಸಾಧನೆ ಮಾಡುತ್ತಾರೆ. ನಗುವುದು ಎಂದರೇನೇ ಎಲ್ಲಾ ಪ್ರಯತ್ನಪೂರ್ವಕ ಕ್ರಿಯೆಗಳನ್ನು ಮರೆಯುವುದು, ಜನರು ನಗುವುದನ್ನೂ ಪ್ರಯತ್ನ ಪೂರ್ವಕವಾದ ಕ್ರಿಯೆಯಾಗಿಸಿಕೊಳ್ಳುತ್ತಿರುವುದನ್ನು ಕಂಡರೆ ಅಪ್ರಯತ್ನ ಪೂರ್ವಕವಾಗಿ ನಗು ಬರುತ್ತದೆ!
ಕಾಮಿಡಿ ಸೀರಿಯಲ್ಲುಗಳು, ಜೋಕುಗಳನ್ನು ಹೇಳಿ ಬಹುಮಾನ ಪಡೆಯಲು ಅದನ್ನೊಂದು ಸ್ಪರ್ಧೆಯಾಗಿಸಿದ ಕಾರ್ಯಕ್ರಮಗಳು ಬಹು ಮಜವಾಗಿರುತ್ತವೆ. ಒಂದೊಂದು ಹಾಸ್ಯ ಪ್ರಸಂಗ ಬಂದಾಗಲೂ, ಸಂಭಾಷಣೆಯಲ್ಲಿ ಒಂದೊಂದು ಪಂಚಿಂಗ್ ಲೈನ್ ಬಂದಾಗಲೂ ಹಿನ್ನೆಲೆಯಲ್ಲಿ ‘ಹ್ಹ..ಹ್ಹ…ಹ್ಹ’ ಎಂಬ ರೆಕಾರ್ಡೆಡ್ ನಗುವನ್ನು ಪ್ಲೇ ಮಾಡುತ್ತಾರೆ. ನಗುವುದಕ್ಕೆಂದೇ ಟಿವಿ ಸೆಟ್‌ಗಳ ಮುಂದೆ ಕುಳಿತ ಜನ ಆ ಎಲ್ಲಿ ನಗಬೇಕು ಎಂದು ಟಿವಿಯವರು ಸೂಚಿಸುವಂತೆ! ನಿಜಕ್ಕೂ ನಾವು ಅಷ್ಟು ಯಾಂತ್ರಿಕವಾಗಿದ್ದೇವೆ. ಮನಃಪೂರ್ವಕವಾಗಿ ನಗುವುದಕ್ಕೂ ಮುಂಚೆ ಇಲ್ಲಿ ನಗಬಹುದಾ, ನಕ್ಕರೆ ಯಾರೇನು ತಿಳಿಯುತ್ತಾರೆ ಎಂದು ಆಲೋಚಿಸಿ ಮುಂದುವರೆಯುವಷ್ಟು ಯಾಂತ್ರಿಕರಾಗಿದ್ದೇವೆ.
ಹೀಗಾಗಿ ನಮ್ಮ ನಗುವೂ, ನಮ್ಮನ್ನು ನಗಿಸಲು ಪ್ರಯತ್ನಿಸುವವರೂ ಇಷ್ಟೇ ಯಾಂತ್ರಿಕವಾಗುತ್ತಿದ್ದಾರೆ.

4 responses so far ↓
hema // July 5, 2008 at 6:00 pm |
yellargu nimma blagu open madi odhi nagoke time iralvalla nage samratare adake anta karyakramagala mele depend agidare jana.
supreeth ks // July 5, 2008 at 6:31 pm |
ಜನರಿಗೆ ಉದ್ಯೋಗ, ವಿದ್ಯಾಭ್ಯಾಸ, ಕೆಲಸ, ಊಟ ತಿಂಡಿ, ಸಂಬಳದ ಹಾಗೆಯೇ ನಗುವೂ ಆಗಿಬಿಟ್ಟಿದೆ ಎಂಬುದೇ ಆತಂಕ. ನಗುವುದು ಸಹಜ ಧರ್ಮ ಎಂಬ ಡಿವಿಜಿಯವರ ಮೂರು ಪದದ ವಾಕ್ಯ ಏನೆಲ್ಲವನ್ನೂ ಹೇಳಬಲ್ಲದು
Nage samrat // July 5, 2008 at 6:41 pm |
ಹೇ ಹೇಮಾ,
ಬ್ಲಾಗು ಓಪನ್ ಮಾಡುವುದಕ್ಕೆ, ಇಲ್ಲವೆ ಟೆಲಿವಿಷನ್ ಸೆಟ್ ಓಪನ್ ಮಾಡುವುದಕ್ಕೆ, ಜೋಕ್ ಪುಸ್ತಕ ಓಪನ್ ಮಾಡುವುದಕ್ಕೆ ನಮ್ಮ ಜನರಿಗಿರುವಷ್ಟು ವ್ಯವಧಾನ ನಗಲು ಬಾಯಿ ಓಪನ್ ಮಾಡುವುದಕ್ಕಿಲ್ಲವಲ್ಲ?!
ನಗೆ ಸಾಮ್ರಾಟ್
Nage samrat // July 5, 2008 at 6:43 pm |
ಸುಪ್ರೀತ್,
ಆತಂಕ ಪಡುವ ಅಗತ್ಯವಿಲ್ಲ. ನಗಲಾಗದವರ ನಗದು ಅವರ ಸಹಾಯಕ್ಕೆ ಬರದು.
ಡಿವಿಜಿಯವರು ಮೂರೇ ಪದದಲ್ಲಿ ಹೇಳಿದ್ದನ್ನು ಅರ್ಥ ಮಾಡಿಕೊಳ್ಳಲಿಕ್ಕೆ ನಮಗೆ ಮೂರು ಜನ್ಮವಾದರೂ ಬೇಕು.
ನಗೆ ಸಾಮ್ರಾಟ್