ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
………………………………………………………………
ಮಾಸ್ಟರ್ ಹಿರಣ್ಣಯ್ಯ ನಮಗೆ ಇಷ್ಟವಾಗುವುದು ಅವರು ನಮ್ಮ ಪರವಾಗಿ ಪಟ್ಟಭದ್ರರನ್ನು, ಭ್ರಷ್ಟ ರಾಜಕಾರಣಿಗಳನ್ನು, ಲಂಚಾವತಾರಿ ಅಧಿಕಾರಿಗಳನ್ನು ಬೈಯ್ಯುತ್ತಾರೆ ಎನ್ನುವ ಕಾರಣಕ್ಕೆ. ಜನಸಾಮಾನ್ಯರು ಯಾರ್ಯಾರನ್ನೆಲ್ಲಾ ಬೈಯ್ಯುವುದಕ್ಕೆ ತುಂಬಾ ಸಮಯದಿಂದ ಕಾಯುತ್ತಿರುತ್ತಾರೋ ಅಂಥವರನ್ನೆಲ್ಲಾ ಬೈಯ್ಯುತ್ತಾ ಹೋಗುವ ಹಿರಣ್ಣಯ್ಯ ಎಷ್ಟೋ ಸಲ ನಮ್ಮೊಳಗಿನ ಕ್ರೋಧದ ದನಿಯಾಗಿಬಿಡುತ್ತಾರೆ, ಜನರೊಳಗಿನ ಜ್ವಾಲಾಮುಖಿಯ ಮುಖವಾಗಿಬಿಡುತ್ತಾರೆ.
ಇವರು ಭ್ರಷ್ಟರನ್ನು ಕೆಣಕಲು, ಚುಚ್ಚಲು ಆಯ್ದುಕೊಂಡದ್ದು ರಂಗಭೂಮಿಯನ್ನು. ತಮ್ಮ ಮನೋಜ್ಞ ಅಭಿನಯದಿಂದ ಅಪ್ರತಿಮ ಹಾಸ್ಯ ಪ್ರಜ್ಞೆಯಿಂದ ಜನರ ಮನಸ್ಸಿಗೆ ಹತ್ತಿರವಾದವರು. ಜನತಾ ದರ್ಬಾರಿನ ತೆನಾಲಿ ರಾಮನಾದರು. ಹಾಸ್ಯದ ರಸಾಯನದೊಂದಿಗೆ ವಾಸ್ತವದ ಕಹಿಗುಳಿಗೆಗಳನ್ನು ಉಣಬಡಿಸಿದರು. ಅದೊಂದೇ ಕಾರಣಕ್ಕಾಗಿ ಅವರು ಅಗ್ಗದ ಹಾಸ್ಯ ನಟರಾಗುವ ಅಪಾಯದಿಂದ ಪಾರಾದರು.
ಮಾಸ್ಟರ್ ಹಿರಣ್ಣಯ್ಯನವರ ಸಂಪೂರ್ಣ ಜೀವನ ಕಥೆ ಅವರ ಮಾತುಗಳಲ್ಲೇ ಕೇಳಿ. ಅವರ ನಾಟಕದ ಧ್ವನಿ ಮುದ್ರಣವನ್ನೂ ಕೇಳಲಿಕ್ಕೆ ಈ ತಾಣಕ್ಕೆ ಭೇಟಿ ಕೊಡಿ.
ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!
![]()
………………………………………………………………
2 responses so far ↓
Kannadahanigalu // June 24, 2008 at 3:14 pm |
ಈ ಕೆಳಗಿನ ವೆಬ್ ಸೈಟ್‍ಅನ್ನು ಪ್ರಾರ್ಂಭಿಸಿದ್ದೇನೆ
ಈ ನಮ್ಮ ನಗಾರಿ ರೆಕಮಂಡೇಶನ್ ಇದಕ್ಕೂ ಕೂಡ ಸಿಗಬಹುದ !!!
http://kannadahanigalu.com/
ದಯವಿಟ್ಟು ಒಮ್ಮೆ ವೀಕ್ಷಿಸಿ ನಿಮ್ಮ ರೆಕಮಂಡೇಶನ್ ಕೊಡಿ .
ಇದನ್ನು ಎಲ್ಲಿ ಹಾಕಲು ತಿಳಿಯಲಿಲ್ಲ. ಹಾಗಾಗಿ ಇಲ್ಲಿ ಹಾಕುತ್ತಿದ್ದೇನೆ. ತಪ್ಪಿದಲ್ಲಿ ಕ್ಷಮಿಸಿ .
Kannadamusic // June 26, 2008 at 11:06 pm |
Tumba chennagithe……
good work……