ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
ನಗೆ ಸಾಹಿತಿಗಳ ಹೆಸರಿನಲ್ಲಿ ‘ನಗದು’ ಮಾಡಿಕೊಳ್ಳುವ ‘ನಗಿಸುವ ಏಜೆಂಟ’ರುಗಳು ನಮ್ಮನ್ನು ತಮ್ಮ ರಿಪೀಟಾದ ಜೋಕುಗಳಿಂದ, ಹಳಸಿಹೋದ ಹಾಸ್ಯಪ್ರಸಂಗಗಳು, ಕದ್ದು ತಂದ, ಕೆರೆದು-ಹರಿದು ಹಿಂದಿ, ಇಂಗ್ಲೀಷು ಚಾನಲ್ಲುಗಳಿಂದ ಅಪಹರಿಸಿದ ಹಾಸ್ಯವನ್ನು ನಮ್ಮ ಮುಂದಿಟ್ಟು ಅಳುವಂತೆ ಮಾಡುವಲ್ಲಿ ಸಫಲರಾಗುತ್ತಿರುವಾಗ ಕೆಲವೇ ಕೆಲವರು ನಮ್ಮನ್ನು ನಗಿಸುವಲ್ಲಿ ಸಫಲರಾಗಿದ್ದಾರೆ. ಅಂಥವರಲ್ಲಿ ಪ್ರಮುಖರು ಪ್ರಾಣೇಶ್. ಪ್ರಾಣೇಶ್ ಬೀಚಿ.
ಇವರ ಹಾಸ್ಯದಲ್ಲಿನ ಸ್ವಂತಿಕೆ ಹಾಗೂ ಉತ್ತರ ಕರ್ನಾಟಕದ ಭಾಷೆಯ ಸೊಗಡು ನಮ್ಮನ್ನು ನಗಿಸುವುದರಲ್ಲಿ ಸೋಲುವುದಿಲ್ಲ. ಬೀಚಿಯವರಿಂದ ಹಾಸ್ಯದ ಪ್ರೇರಣೆ ಪಡೆದಿದ್ದೇನೆ ಎನ್ನುವ ಪ್ರಾಣೇಶರ ಕಾರ್ಯಕ್ರಮಗಳ ವಿಡಿಯೋಗಳನ್ನು ಒಂದು ಕಡೆ ಒಟ್ಟು ಮಾಡಿ ಇಲ್ಲಿ ಕೊಡಲಾಗಿದೆ.
ರಾಜಕಾರಣಿಗಳು ತಾವೂ ಅಳುತ್ತಾ ನಮ್ಮನ್ನೂ ಅಳಿಸುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ನಗೆಗಾಗಿ ಈ ತುಣುಕು…
0 responses so far ↓
There are no comments yet...Kick things off by filling out the form below.