ನಮ್ಮ ಸಮೂಹ ಮಾಧ್ಯಮಗಳಾದ ಟಿವಿ, ಸಿನೆಮಾ, ಪತ್ರಿಕೆ, ನಾಟಕಗಳಲ್ಲಿ ಹಾಸ್ಯಕ್ಕೆ ಸಿಗಬೇಕಾದ ನ್ಯಾಯಯುತವಾದ ಪ್ರಾಧಾನ್ಯತೆ ದೊರೆಯುತ್ತಿಲ್ಲವೇ? ನವರಸಗಳಲ್ಲಿ ಪ್ರತ್ಯೇಕವಾದ ಸ್ಥಾನವೊಂದನ್ನು ಪಡೆದುಕೊಂಡಿರುವ ಹಾಸ್ಯವನ್ನು ಕೇವಲ ಊಟಕ್ಕೆಉಪ್ಪಿನಕಾಯಿ ಎಂಬಂತೆ ಮಾತ್ರ ನಡೆಸಿಕೊಳ್ಳುವುದು ಸಾಧುವೇ?
ಹಾಸ್ಯಕ್ಕೇ ಮೀಸಲಾದಂತಹ ಸಿನೆಮಾ, ಪತ್ರಿಕೆ, ಟಿವಿ ಚಾನೆಲ್‍ಗಳಿದ್ದರೂ ಸಹ ಎಲ್ಲೋ ಒಂದು ಕಡೆ ಹಾಸ್ಯ ಎಂಬ ಜೀವನರಸ ತನಗೆ ತಕ್ಕುದಾದ ಸ್ಥಾನದಿಂಡ ವಂಚಿತವಾಗುತ್ತಿದೆಯಾ? ಕಾಮೆಡಿಯನ್ಸ್ ಯಾಕೆ ಯಾವಾಗಲೂ ಸೈಡ್ ರೋಲ್‌ಗಳಲ್ಲಿಯೇ ಇರುತ್ತಾರೆ? ಸಾಹಸ, ಬುದ್ದ್ಧಿವಂತಿಕೆ, ದೈಹಿಕ ಶಕ್ತಿ ಇವೆಲ್ಲಾ ಪ್ರತಿನಿಧಿಸುವ ಶೌರ್ಯ, ಕ್ರೋಧ ಮುಂತಾದ ರಸಗಳೇ ನಾಯಕನ ಪಟ್ಟವನ್ನು ಪಡೆಯುವುದೇಕೆ?
ಬದುಕಿನ ಬಿಗುವನ್ನು ಸಡಿಲಗೊಳಿಸಲು ಎನ್ನುವಂತೆ, ಏರುವ ತಲೆಬಿಸಿಯನ್ನು ಕಡಿಮೆ ಮಾಡುವುದಕ್ಕೆ ಎಂಬಂತೆ ಮಾತ್ರ ಹಾಸ್ಯವನ್ನು ಬಳಸಿಕೊಳ್ಳುತ್ತಿದ್ದೇವೆ. ಇಡೀ ಬದುಕನ್ನೇ, ಇಡೀ ಜಗತ್ತನ್ನೇ ಹಾಸ್ಯದ ದೃಷ್ಟಿಕೋನದಿಂದ ನೋಡುವ ಬಗ್ಗೆಯೇಕೆ ನಮಗೆ ಒಲವಿಲ್ಲ? ಸೀರಿಯಸ್ಸಾಗಿರುವುದಕ್ಕೆ ಏಕೆ ನಾವು ಅಷ್ಟು ಬೆಲೆ ಕೊಡುತ್ತೇವೆ?
ಹಾಸ್ಯಕ್ಕೆ ನ್ಯಾಯ ಒದಗಬೇಕು ಎನ್ನಿಸುವುದಿಲ್ಲವೇ? ಅಭಿಪ್ರಾಯ ತಿಳಿಸ್ತೀರಲ್ಲ, ತಮಾಷೆಗಲ್ಲ, ಸೀರಿಯಸ್ಸಾಗಿ!
Posted by ಹಾಸ್ಯದ ಸಾರ್ಥಕತೆ! « ನಗೆ ನಗಾರಿ ಡಾಟ್ ಕಾಮ್ on February 5, 2008 at 8:18 am
[...] (ಕಳೆದ ವಾರದ ಚರ್ಚೆ: ಹಾಸ್ಯ ಉಪ್ಪಿನಕಾಯಿ ಮಾತ್ರವೇ?) [...]